ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ವಿಜ್ಞಾನಿಗಳಿಂದ ಕ್ಷೇತ್ರ ಭೇಟಿ

ಉಡುಪಿ : ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಬಿ. ಧನಂಜಯ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ, ಚೈತನ್ಯ ಹೆಚ್. ಎಸ್, ತೋಟಗಾರಿಕೆ ತಜ್ಞರು, ಡಾ. ಸಚಿನ್ ಯು. ಎಸ್, ಕೀಟಶಾಸ್ತ್ರ ತಜ್ಞರು ಸೇರಿದ ತಂಡವು  ಅರುಣ್ ಡಿ. ಸಿಲ್ವ, ಪ್ರಗತಿಪರ ಕೃಷಿಕರು ಸಾಣೂರು ಗ್ರಾಮ, ಕಾರ್ಕಳ ತಾಲೂಕು ಇವರ ಅಡಿಕೆ ತೋಟಕ್ಕೆ ಇತ್ತೀಚೆಗೆ ಬೇಟಿ ನೀಡಿದರು. ಅಡಿಕೆ ಗಿಡಗಳನ್ನು ವಿಜ್ಞಾನಿಗಳ ತಂಡ ಗಮನಿಸಿದಾಗ, ಅಡಿಕೆ ಗರಿಗಳಿಗೆ ಎಲೆ ನುಸಿ ಬಾದೆ […]

ಉಡುಪಿ: ಮಹಿಳಾ ಸಾಧಕರೊಂದಿಗೆ ಸಂವಾದ, ಸನ್ಮಾನ, ವಿದ್ಯಾರ್ಥಿ ವೇತನ ವಿತರಣೆ

ಉಡುಪಿ: ಸಮಾಜದಲ್ಲಿ ಇಂದು ಆತ್ಮೀಯತೆ, ಪ್ರೀತಿ, ಸಂಬಂಧಗಳು ಕಡಿಮೆ ಆಗುತ್ತಿದ್ದು, ಅವುಗಳನ್ನು ಬೆಸೆಯುವ ಕೆಲಸ ಮಾಡಬೇಕು ಎಂದು ಹಿರಿಯ ಸಾಹಿತಿ ವೈದೇಹಿ ಹೇಳಿದರು. ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಲಬಾರ್‌ ಗೋಲ್ಡ್‌ ಆಂಡ್‌ ಡೈಮಂಡ್‌ ಉಡುಪಿ ಮಳಿಗೆಯಲ್ಲಿ ಭಾನುವಾರ ಆಯೋಜಿಸಿದ್ದ ಮಹಿಳಾ ಸಾಧಕರೊಂದಿಗೆ ಸಂವಾದ, ಸನ್ಮಾನ ಮತ್ತು ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು. ಒಳ್ಳೆಯ ಮನಸ್ಸಿದ್ದರೆ ದೇಶ, ಸಮಾಜ, ಮನೆ ಸೇರಿದಂತೆ ಎಲ್ಲರನ್ನು ಕೂಡ ಗೆಲ್ಲಬಹುದು. ಮನಸ್ಸು ಹಾಳಾದರೆ ಅದಕ್ಕಿಂತ ದೊಡ್ಡ ಪ್ರಳಯ ಬೇರೊಂದಿಲ್ಲ. […]

ಉಡುಪಿ: ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ಗಿಡನೆಡುವ ಕಾರ್ಯಕ್ರಮಕ್ಕೆ ಚಾಲನೆ

ಉಡುಪಿ: ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಪರಿಸರದ ಕಾಳಜಿಯಿಂದ ಸಕಾಲಿಕ ಮಳೆಗಾಗಿ  ಹಸಿರನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಗಿಡಗಳನ್ನು ನೆಟ್ಟು ರಕ್ಷಿಸಿ ಮರಗಳನ್ನಗಿಸುವ ಜವಾಬ್ದಾರಿಯನ್ನಿಟ್ಟುಕೊಂಡು, ಪರಿಸರದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಅದಮಾರು ಮಠದಲ್ಲಿ  ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಚಾಲನೆ ನೀಡಿದರು. ಅದಮಾರು ಹಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು,ಅದಮಾರು ಕಿರಿಯ  ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು,ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉಪಸ್ಥಿತರಿದ್ದು ಸಸಿಗಳನ್ನು ನೆಟ್ಟರು.ಪಲಿಮಾರು ಮಠದ ದಿವಾನರಾದ ವೇದವ್ಯಾಸ ತಂತ್ರಿಗಳು,ಅದಮಾರು ಮಠದ […]