ಜ. 14: ಉಡುಪಿ ನಗರದ ಮುಖ್ಯ ರಸ್ತೆಗಳಲ್ಲಿ ನೂರಾರು ದೀಪಗಳನ್ನು ಬೆಳಗಿಸುವ ‘ಧರ್ಮ ರಕ್ಷ ಜ್ವಾಲಾ’ ಕಾರ್ಯಕ್ರಮ

ಉಡುಪಿ: ಶಬರಿಮಲೆ ದೇಗುಲದ ಪಾವಿತ್ರ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಮಕರ ಸಂಕ್ರಮಣದ ಅಂಗವಾಗಿ ಉಡುಪಿ ನಗರದ ಮುಖ್ಯ ರಸ್ತೆಗಳಲ್ಲಿ ನೂರಾರು ದೀಪಗಳನ್ನು ಬೆಳಗಿಸುವ ಕಾರ್ಯಕ್ರಮ ‘ಧರ್ಮ ರಕ್ಷ ಜ್ವಾಲಾ’ ಅನ್ನು ಜ. 14ರಂದು ಸಂಜೆ 6.20ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಧರ್ಮ ಫೌಂಡೇಶನ್ ಅಧ್ಯಕ್ಷ ಹರಿಯಪ್ಪ ಕೋಟ್ಯಾನ್ ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕರ ಸಂಕ್ರಮಣದಂದು ಶಬರಿಮಲೆ ಸ್ವಾಮಿ ಅಯ್ಯಪ್ಪನ ಕ್ಷೇತ್ರದಲ್ಲಿ ಸಂಜೆ 6.42 ಕ್ಕೆ ಮಕರ ಜ್ಯೋತಿ ಬೆಳಗಲಿದೆ. ಪಂದಳ ರಾಜನ ಆದೇಶದಂತೆ ಮತ್ತು ಧರ್ಮ ಫೌಂಡೇಶನ್‍ನ ವತಿಯಿಂದ ದೇಶದಾದ್ಯಂತ ಕೋಟಿ ಕೋಟಿ […]