ನೆಹರು ಸ್ಪೋರ್ಟ್ಸ್ ಆ್ಯಂಡ್ ಅಸೋಸಿಯೇಶನ್ ನ 35ನೇ ವಾರ್ಷಿಕೋತ್ಸವ; ಸಾಧಕರಿಗೆ, ವಿದ್ಯಾರ್ಥಿಗಳಿಗೆ ಸನ್ಮಾನ

ಉಡುಪಿ: ನೆಹರು ಸ್ಪೋರ್ಟ್ಸ್ ಆ್ಯಂಡ್ ಅಸೋಸಿಯೇಶನ್ ಅಲೆವೂರು ಇದರ 35ನೇ ವಾರ್ಷಿಕೋತ್ಸವ ಸಮಾರಂಭವು ಅಲೆವೂರು ನೆಹರು ಕ್ರೀಡಾಂಗಣದಲ್ಲಿ ಜರುಗಿತು. ಪತ್ರಕರ್ತೆ ಸುರಯ್ಯ ಅಂಜುಂ ಮಾತನಾಡಿ, ರಾಜಕೀಯವಾಗಿ ಚಾಚಾ ನೆಹರು ಅವರನ್ನು ತಿರುಚುವ ಕೆಲಸಗಳು ಆದರೂ ಕೂಡ ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಒಂದು ಸಂಘವನ್ನು ಕೇವಲ ಒಂದು ವ್ಯಕ್ತಿಯಿಂದ ಬೆಳೆಸಲು ಸಾಧ್ಯವಿಲ್ಲ. ಹತ್ತು ಕೈಗಳು ಸೇರಿದಾಗ ಮಾತ್ರ ಇಂತಹ ಸುಂದರ ಸಂಸ್ಥೆಗಳು ಬೆಳೆಯಲು ಸಾಧ್ಯ. ಈ ವೇದಿಕೆಯಲ್ಲಿ ಮಹಿಳೆಯರಿಗೆ ಗೌರವ, ಸ್ಥಾನಮಾನ ಸಿಗುತ್ತಿದೆ […]