ನಯಂಪಳ್ಳಿಯ ನಾರಾಯಣ ಅಂಚನ್‌ ನಿಧನ

‌‌‌‌‌‌‌ಉಡುಪಿ: ಪ್ರಗತಿಪರಕೃಷಿಕರು, ನಯಂಪಳ್ಳಿ ಶ್ರೀ ಮಡಿ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ಭಜನಾಮಂಡಲಿಯ ಸ್ಥಾಪಕ ಕೋಶಾಧಿಕಾರಿಯೂ,ಅಬಕಾರಿ ಗುತ್ತಿಗೆದಾರರು ಆಗಿದ್ದ ನಯಂಪಳ್ಳಿ ‌ನಿವಾಸಿ‌ ನಾರಾಯಣ ಅಂಚನ್ (79) ಆ.25 ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.‌‌‌ ‌‌ ‌ ಮೃತರು ಪತ್ನಿ ಇಬ್ಬರು ಪುತ್ರರು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂದು ಬಾಂಧವರನ್ನು ಅಗಲಿದ್ದಾರೆ