ರಾಷ್ಟ್ರೀಯ ಮಟ್ಟದ ಭರತನಾಟ್ಯ “ವರ್ಣ ಸ್ಪರ್ಧೆ”: ಉಡುಪಿಯ ಪಿ ಜಿ ಪನ್ನಗಾ ರಾವ್ ಸೀನಿಯರ್’ನಲ್ಲಿ ಪ್ರಥಮ ಹಾಗೂ ಸಾನ್ವಿ ರಾಜೇಶ್ ಜೂನಿಯರ್’ನಲ್ಲಿ ತೃತೀಯ ಸ್ಥಾನ.

ಉಡುಪಿ: ಕಳೆದ ಗುರುವಾರ ಬೆಂಗಳೂರು ಕಲಾಗ್ರಾಮದಲ್ಲಿ ಚಲನಚಿತ್ರತಾರೆ ಭಾವನಾ ರಾಮಣ್ಣ ಹಾಗೂ ಚಾರುಮತಿಯವರು ತಮ್ಮ ಹೂವು ಫೌಂಡೇಶನ್ ಫಾರ್ ಆರ್ಟ್ಸ್ ಮುಖಾಂತರ ನಡೆಸಿದ ರಾಷ್ಟ್ರೀಯ ಮಟ್ಟದ ಭರತನಾಟ್ಯ “ವರ್ಣ ಸ್ಪರ್ಧೆ”ಯಲ್ಲಿ ಉಡುಪಿಯ ಸೃಷ್ಟಿ ನೃತ್ಯ ಕಲಾ ಕುಟೀರದ ನಿರ್ದೇಶಕಿ ಡಾ.ಮಂಜರಿ ಚಂದ್ರ ಪುಷ್ಪರಾಜ್ ಇವರ ಶಿಷ್ಯೆಯರಾದ ಪಿ ಜಿ ಪನ್ನಗಾ ರಾವ್ ಸೀನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರೂ.1,00,000 ಬಹುಮಾನ ರೂಪದಲ್ಲಿ ಪಡೆದುಕೊಂಡಿದ್ದು, ಸಾನ್ವಿ ರಾಜೇಶ್ ಜೂನಿಯರ್ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ರೂ.30,000 ಬಹುಮಾನ […]