ನ.9ರಂದು ಉಡುಪಿಯಲ್ಲಿ “ನನ್ನ ನಾಡು ನನ್ನ ಹಾಡು” ಜಿಲ್ಲಾಮಟ್ಟದ ಕನ್ನಡ ಹಾಡುಗಳ ಸ್ಪರ್ಧೆ

ಉಡುಪಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಲಯನ್ಸ್, ರೋಟರಿ ಸದಸ್ಯರು ಹಾಗೂ ಸಾರ್ವಜನಿಕರಿಗೆ ನ.9ರಂದು ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ “ನನ್ನ ನಾಡು ನನ್ನ ಹಾಡು” ಎಂಬ ಜಿಲ್ಲಾಮಟ್ಟದ ಕನ್ನಡ ಹಾಡುಗಳ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಸಂಯೋಜಕ ನಂದಕಿಶೋರ್ ಕೆಮ್ಮಣ್ಣು ಹೇಳಿದರು. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸ್ಪರ್ಧೆಯನ್ನು ಲಯನ್ಸ್ 317 ಸಿ ಹಾಗೂ ರೋಟರಿ ಕ್ಲಬ್ ಜಿಲ್ಲೆ 3182 ಒಳಗೊಂಡ ಲಯನ್ಸ್ ಕ್ಲಬ್ ಅಂಬಲಪಾಡಿ, ಕಲ್ಯಾಣಪುರ, ಸಂತೆಕಟ್ಟೆ, ಉಡುಪಿ ಚೇತನ ಹಾಗೂ ರೋಟರಿ ಸಂಸ್ಥೆ […]