ಉಡುಪಿ ಕೃಷ್ಣಮಠದಲ್ಲಿ ಸಂಸದ ತೇಜಸ್ವಿ ಸೂರ್ಯ ದಂಪತಿಯಿಂದ ಸಂಗೀತ ಸೇವೆ

ಉಡುಪಿ: ಇತ್ತೀಚೆಗೆ ದಾಂಪತ್ಯ ಜೀವನ ಪ್ರವೇಶ ಮಾಡಿದ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಮತ್ತು ಗಾಯಕಿ ಶಿವಶ್ರೀ ಉಡುಪಿ ಶ್ರೀ ಕೃಷ್ಣಮಠದಲ್ಲಿ ಸಂಗೀತ ಸೇವೆ ನೀಡಿದ್ದಾರೆ. ರಥಬೀದಿಯಲ್ಲಿ ನಡೆದ ನಿತ್ಯೋತ್ಸವದಲ್ಲಿ ಭಾಗಿಯಾದ ಎರಡು ಕುಟುಂಬಗಳು, ಕೃಷ್ಣ ದೇವರ ಗರ್ಭಗುಡಿಯಲ್ಲಿ ನಡೆಯುವ ಮಹಾಪೂಜೆ ಮತ್ತು ಶಯನ ಪೂಜೆಯಲ್ಲಿ ಭಾಗಿಯಾಯ್ತು. ಈ ಸಂದರ್ಭದಲ್ಲಿ ಶಿವಶ್ರೀ ತೇಜಸ್ವೀ ದೇವರ ಮುಂದೆ ಸಂಗೀತ ಸೇವೆಯನ್ನು ನೀಡಿದರು. ಜಗದೋದ್ಧಾರನಾ ಆಡಿಸಿದಳು ಯಶೋಧೆ.. ಮತ್ತುತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ಹಾಡನ್ನು ಹಾಡಿದರು. ಪರ್ಯಾಯ ಪುತ್ತಿಗೆ […]