ಉಡುಪಿಯ ಮಾಧ್ಯಮ ಮಿತ್ರರಿಂದ ನೆರೆ ಸಂತ್ರಸ್ತರಿಗೆ ನೆರವು

ಉಡುಪಿ: ಭಾರಿ ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕ, ಮಲೆನಾಡು ಪ್ರದೇಶಗಳಲ್ಲಿ ಸಾವಿರಾರು ಮಂದಿ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿರುವ ಹಿನ್ನೆಲೆಯಲ್ಲಿ ಅವರ ನೆರವಿಗೆ ಉಡುಪಿ ಪ್ರೆಸ್ ಕ್ಲಬ್ ಮಾಧ್ಯಮ ಮಿತ್ರರ ತಂಡ ಸುಮಾರು ರೂ 2 ಲಕ್ಷ ಮೌಲ್ಯದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಕಳುಹಿಸಿದರು. ವಿವಿಧ ಟಿವಿ ವಾಹಿನಿಗಳು ನೀಡಿದ ಕರೆಯಂತೆ ಉಡುಪಿ ಪ್ರೆಸ್ ಕ್ಲಬ್ ಸಹಕಾರದೊಂದಿಗೆ ಜಿಲ್ಲೆಯ ವಿವಿಧ ಭಾಗಗಳಿಂದ ಸಂತ್ರಸ್ಥರ ಅಗತ್ಯ ಬಳಕೆಗೆ ಬೇಕಾದ ಬಟ್ಟೆ, ನೀರು, ಅಕ್ಕಿ, […]