ಡಾ. ಕೆ. ಎಸ್. ರಾಜಣ್ಣ ಅವರಿಗೆ ಬಿ.ಹರಿಶ್ಚಂದ್ರ ಆಚಾರ್ಯ ಸ್ಮಾರಕ ಪ್ರಶಸ್ತಿ.

ಮಂಗಳೂರು: ಅಂಗವಿಕಲರಿಗೆ ಅನುಕಂಪ ಬೇಡ, ಅವರಿಗೆ ಅವಕಾಶ ಬೇಕು.ಅವರು ಕೂಡ ದೇಶದ ಆಧಾರಸ್ತಂಭವಾಗುವ ಶಕ್ತಿ ಹೊಂದಿರುತ್ತಾರೆ ಎಂದು 2024ರ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ|ಕೆ. ಎಸ್. ರಾಜಣ್ಣ ಹೇಳಿದ್ದಾರೆ. ಹಿರಿಯ ಸಮಾಜ ಸೇವಕ ದಿ| ಬಿ. ಹರಿಶ್ಚಂದ್ರ ಆಚಾರ್ಯ ಅವರ 112ನೇ ಜನ್ಮದಿನೋತ್ಸವ ಪ್ರಯುಕ್ತ ಶ್ರೀ ಬಿ.ಹರಿಶ್ಚಂದ್ರ ಆಚಾರ್ಯ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಮಂಗಳೂರು ಕಾಳಿಕಾಂಬ ವಿನಾಯಕ ದೇವಸ್ಥಾನದಲ್ಲಿ ರವಿವಾರ ಜರಗಿದ ಸಮಾರಂಭದಲ್ಲಿ 2025 ನೇ ಸಾಲಿನ ‘ಬಿ. ಹರಿಶ್ಚಂದ್ರ ಆಚಾರ್ಯ ಸ್ಮಾರಕ ಪ್ರಶಸ್ತಿ’ ಸ್ವೀಕರಿಸಿ […]