ಉಡುಪಿ:IND-PAK WAR:ಮಲ್ಪೆಯಲ್ಲಿ ಮೊಳಗಿದ ಸೈರನ್‌.!

ಉಡುಪಿ: ಭಾರತ-ಪಾಕಿಸ್ಥಾನ ನಡುವಿನ ಯುದ್ಧಭೀತಿಯ ಮುನ್ನೆಚ್ಚರಿಕೆ ಕ್ರಮವಾಗಿ ಮಲ್ಪೆಯ ಬಾಪುತೋಟದಲ್ಲಿರುವ ಉಡುಪಿ ಕೊಚ್ಚಿನ್‌ ಶಿಪ್‌ಯಾರ್ಡ್‌ನಲ್ಲಿ ಅಗ್ನಿಶಾಮಕ ದಳದಿಂದ ನಾಗರಿಕ ರಕ್ಷಣಾ ಅಣಕು ಕಾರ್ಯಾಚರಣೆ ನಡೆಸಲಾಯಿತು. ಸಂಜೆ ಸುಮಾರು 4 ರ ವೇಳೆಗೆ ಸಂಸ್ಥೆಯ ಸೈರನ್‌ ಮೊಳಗತೊಡಗಿದ್ದು, ಕೂಡಲೇ ಅಗ್ನಿಶಾಮಕ ದಳದವರು ಆಗಮಿಸಿ ವಿದ್ಯುತ್‌ ಹಾಗೂ ಗ್ಯಾಸ್‌ ಸಂಪರ್ಕವನ್ನು ಕಡಿತಗೊಳಿಸಿದರು. ಕರ್ತವ್ಯ ನಿರತರಾಗಿದ್ದವರನ್ನು ಕೂಡಲೇ ಸುರಕ್ಷಿತ ಸ್ಥಳಕ್ಕೆ ರವಾನಿಸಿ ಎಷ್ಟು ಮಂದಿ ಇದ್ದಾರೆ ಎಂಬ ಮಾಹಿತಿ ಪಡೆದು ಉಳಿದವರಿಗೆ ಒಳಭಾಗದಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಅವರನ್ನು ಪತ್ತೆ ಹಚ್ಚಲಾಯಿತು. […]