ಯಾವುದೇ ತನಿಖೆಗೆ ಸಿದ್ಧ ಎಂದ ಮಹಾಲಕ್ಷ್ಮೀ ಬ್ಯಾಂಕಿನ ಅಧ್ಯಕ್ಷರು ಅವರ ಮಾತಿಗೆ ಬದ್ದರಾಗಿರದೇ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿರುವುದು ಯಾಕೆ : ರಮೇಶ್ ಕಾಂಚನ್ ಪ್ರಶ್ನೆ.
ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ತನ್ನ ಸುಸ್ತಿದಾರರು ಎಂದು ಪರಿಗಣಿಸಲ್ಪಟ್ಟವರು ನೀಡಿದ ದೂರಿನ ಮೇಲೆ ದಾಖಲಾಗಿರುವ ಎಫ್.ಐ.ಆರ್ ವಿರುದ್ಧದ ತನಿಖೆಗೆ ಹೈಕೋರ್ಟ್ ಮೂಲಕ ತಡೆಯಾಜ್ಞೆ ತಂದಿಲ್ಲ ಎಂದಾದರೆ ಬ್ಯಾಂಕಿನ ಅಧ್ಯಕ್ಷರೇ ತಿಳಿಸಿರುವಂತೆ ನಿಷ್ಪಕ್ಷಪಾತವಾದ ತನಿಖೆಗೆ ಸಹಕರಿಸಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಆಗ್ರಹಿಸಿದ್ದಾರೆ. ಮಲ್ಪೆ ಮಧ್ವರಾಜ್ ಅಂತಹ ಹಿರಿಯ ಚೇತನಗಳ ನೇತೃತ್ವದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿಯ ಮೊಗವೀರ ಮೀನುಗಾರ ಮುಖಂಡರು ಒಗ್ಗೂಡಿ ಉತ್ತಮ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಅಂದು ಹುಟ್ಟು ಹಾಕಿದ […]