ಪರೀಕ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನ; ಮಾ.3ರಿಂದ ಅಷ್ಟಬಂಧ ಬ್ರಹ್ಮಕಲಶೋತ್ಸವ

ಉಡುಪಿ: ಮಾರ್ಚ್ 3ರಿಂದ 6ರ ವರೆಗೆ ನಡೆಯಲಿರುವ ಆತ್ರಾಡಿ ಸಮೀಪದ ಪರೀಕ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಬಿಡುಗಡೆಗೊಳಿಸಿದರು. ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ದೇವಳದ ಆವರಣದಲ್ಲಿ ನಡೆದ ಪೂರ್ವಸಿದ್ಧತೆ ಸಭೆಯಲ್ಲಿ ಆಮಂತ್ರಣಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು, ಜನರಲ್ಲಿ ಭಕ್ತಿ ಶಕ್ತಿಯ ಜಾಗೃತಿಗಾಗಿ ದೇವಳದ ಜೀರ್ಣೋದ್ಧಾರದಂಥ ಕಾರ್ಯಕ್ರಮ ಅಗತ್ಯ. ಮನುಷ್ಯನ ಪ್ರಯತ್ನದೊಂದಿಗೆ ದೈವಾನುಗ್ರಹ ಇದ್ದಲ್ಲಿ ಹಮ್ಮಿಕೊಂಡ ಕಾರ್ಯ ಸುಗಮವಾಗುತ್ತದೆ. ಊರವರ […]