ಉಡುಪಿ: ಸಾಲ ಸೌಲಭ್ಯಗಳಿಗೆ ಸಂಪರ್ಕಿಸುವಂತೆ ಕರಪತ್ರ ಹಂಚಿಕೆ: ಯಾವುದೇ ದಾಖಲೆ ನೀಡದಂತೆ ಜಿಲ್ಲಾಡಳಿತ ಸಾರ್ವಜನಿಕರಲ್ಲಿ ಮನವಿ.

ಉಡುಪಿ: ಕಳೆದ ಒಂದೆರಡು ದಿನಗಳಿಂದ ಮಲ್ಪೆ ಸುತ್ತುಮುತ್ತಲಿನ ಪ್ರದೇಶದ ವ್ಯಾಪ್ತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯಡಿಯಲ್ಲಿ ಎಲ್ಲಾ ತರದ ಸಾಲ ಸೌಲಭ್ಯಗಳಿಗೆ ಸಂಪರ್ಕಿಸುವಂತೆ ಕರಪತ್ರ ಹಂಚುತ್ತಿದ್ದು, ಇದನ್ನು ನಂಬಿ ಯಾವುದೇ ರೀತಿಯ ವ್ಯವಹಾರ, ದಾಖಲೆ ನೀಡಬಾರದು ಎಂದು ಉಡುಪಿ ಜಿಲ್ಲಾಡಳಿತ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಕೇವಲ ಮೊಬೈಲ್ ನಂಬ್ರ ಮಾತ್ರ ಹೊಂದಿರುವ ಈ ಕರಪತ್ರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯಡಿಯಲ್ಲಿ ಎಲ್ಲಾ ತರದ ಸಾಲ ಸೌಲಭ್ಯ ಗಳಿಗಾಗಿ ಸಂಬಂಧಿಸಿದ ದಾಖಲೆಗಳ ಜೊತೆ ಸಂಪರ್ಕಿಸುವಂತೆ ಎರಡು […]