ಉಡುಪಿ:ಕುತ್ಯಾರು ಶ್ರೀ ಮೂಲದ ಬೆಟ್ಟು ಮೊಗೇರ ನಾಗಬನ ವಾರ್ಷಿಕ ನಾಗಾರಾಧನೆ, ಹಾಗೂ ಅನ್ನಸಂತರ್ಪಣೆ.

ಉಡುಪಿ:ಮೊಗೇರ ಜನಾಂಗದ ಕುಲದೈವಗಳಾದ ಮುದ್ದ ಕಳಲ ತನ್ನಿ ಮಾನಿಗ ಜನ್ಮಸ್ಥಳ ಕಾಪು ತಾಲೂಕು ಕುತ್ಯಾರು ಮೂಲ್ದೊಟ್ಟು ಮುಗೇರ ನಾಗಬನದಲ್ಲಿ ವಾರ್ಷಿಕ ನಾಗರಾಧನೆ, ಅನ್ನಸಂತರ್ಪಣೆ ತಾ. 22.5.2025 ರಂದು ಮೊಗೇರ ಸಮಾಜದ ಗುರಿಕಾರರಾದ ಉದಯ್ ಶಿರ್ವ , ರಂಜಿತ್ ಶಿರ್ವ, ಸಂದೇಶ್ ಶಿರ್ವ ಹಾಗೂ ಮೊಗೆರ ಸಮಾಜದ ಇತರ ಸದಸ್ಯರ ನೇತೃತ್ವದಲ್ಲಿ ನಡೆಯಿತು. ಮೂಲ್ದೊಟ್ಟು ಈ ಪ್ರದೇಶ ಒಂದು ಕಾಲದಲ್ಲಿ ಅರಣ್ಯ ಪ್ರದೇಶವಾಗಿತ್ತು. ತುಳುನಾಡಿನ ಮೂಲನಿವಾಸಿಗಳಾದ ಮೊಗೇರರ ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದರು. ಮೊಗೇರರ ಬನ (ವನ) ಮೂಲ್ದೊಟ್ಟು ಬನ. […]