ಉಡುಪಿ ಕೃಷ್ಣಾಪುರ ಮಠದ ಪರ್ಯಾಯ ಪೂರ್ವಭಾವಿ ಬಾಳೆ ಮುಹೂರ್ತ ಕಾರ್ಯಕ್ರಮ ನಾಳೆ

ಉಡುಪಿ: ಉಡುಪಿ ಅಷ್ಟಮಠಗಳ ಪೈಕಿ ಅತ್ಯಂತ ಪ್ರಸಿದ್ಧಿ ಪಡೆದಿರುವ ಶ್ರೀ ಕೃಷ್ಣಾಪುರ ಮಠದ ವಿದ್ಯಾಸಾಗರತೀರ್ಥ ಶ್ರೀಪಾದರ ಪರ್ಯಾಯ ಪೂರ್ವಭಾವಿ ಬಾಳೆ ಮುಹೂರ್ತ ಕಾರ್ಯಕ್ರಮವು ನಾಳೆ (ನ. 30) ನಡೆಯಲಿದೆ. ಕೃಷ್ಣಾಪುರ ಶ್ರೀಗಳಿಗೆ 4ನೇ ಪರ್ಯಾಯ: ಕೃಷ್ಣಾಪುರದ ವಿದ್ಯಾಸಾಗರತೀರ್ಥರು 4ನೇ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. 1974-75, 1990-91, 2006-07ರಲ್ಲಿ 3 ಬಾರಿ ಪರ್ಯಾಯ ಪೂಜೆ ನಿರ್ವಹಿಸಿದ್ದರು. 2022-23ರ ಅವಧಿಗೆ ಅವರು ನಾಲ್ಕನೇ ಬಾರಿಗೆ ಪೂಜಾ ಕೈಂಕರ್ಯ ನೆರವೇರಿಸಲಿದ್ದಾರೆ. ಆಶ್ರಮ ಜ್ಯೇಷ್ಠರಾಗಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥರು ಕೃಷ್ಣನ ಪಾದ […]