ಉಡುಪಿ ಕೃಷ್ಣಮಠಕ್ಕೂ ಮಹಾಲಕ್ಷ್ಮೀ ಸನ್ನಿಧಾನಕ್ಕೂ ಅವಿನಾಭಾವ ಸಂಬಂಧವಿದೆ: ಪುತ್ತಿಗೆ ಶ್ರೀ

ಉಡುಪಿ: ಉಡುಪಿ ಶ್ರೀಕೃಷ್ಣ ಸನ್ನಿಧಾನ ಹಾಗೂ ಉಚ್ಚಿಲದ ಶ್ರೀ ಮಹಾಲಕ್ಷ್ಮೀ ಸನ್ನಿಧಾನಗಳು ಪರಸ್ಪರ ಅಂತಃ ಸಂಬಂಧವುಳ್ಳ ಸನ್ನಿಧಾನಗಳಾಗಿದೆ. ಹಾಗಾಗಿ ಲಕ್ಷ್ಮೀದೇವಿ ಇಲ್ಲಿ ತನ್ನ ವೈಭವವನ್ನು ಮೆರೆದಿದ್ದಾಳೆ. ದೇಗುಲದ ಬ್ರಹ್ಮಕಲಶೋತ್ಸವವು ಡಾ| ಜಿ. ಶಂಕರ್ ಅವರಿಂದ ಆದರ್ಶಪ್ರಾಯವಾಗಿ ನಡೆದಿದೆ ಎಂದು ಉಡುಪಿ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು. ಅವರು ಶನಿವಾರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ಸನ್ನಿಧಾನದ ಬ್ರಹ್ಮಕಲಶೋತ್ಸವ ಪುಣ್ಯೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಶ್ರೀ ಕ್ಷೇತ್ರದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. […]