ನಾಗರಿಕ ಸಮಿತಿಯಿಂದ ವಿಟ್ಲಪಿಂಡಿಗೆ 10 ಸಾವಿರ ಚಕ್ಕುಲಿ ವಿತರಣೆ

ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ನಗರದ ಮಾರುತಿ ವಿಥೀಕಾದಲ್ಲಿ ವಿಟ್ಲಪಿಂಡಿಯ ಪ್ರಯುಕ್ತ ಹತ್ತು ಸಾವಿರ ಚಕ್ಕುಲಿಯನ್ನು ಪ್ರಸಾದವಾಗಿ ಭಕ್ತರಿಗೆ ವಿತರಿಸಲಾಯಿತು. ಶ್ರೀವೃಂದಾವನಸ್ಥರಾಗಿರುವ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು, ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ವಿಟ್ಲಪಿಂಡಿ ಉತ್ಸವಕ್ಕೆ ಮೆರಗು ನೀಡಿದ್ದವರಾಗಿದ್ದರು. ಪೂಜ್ಯ ಶ್ರೀಪಾದರ ಸ್ಮರಣಾರ್ಥವಾಗಿ ಕಳೆದ ಐದು ವರ್ಷಗಳಿಂದ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರು ಚಕ್ಕುಲಿ ಪ್ರಸಾದವನ್ನು ಭಕ್ತಾದಿಗಳಿಗೆ ವಿತರಿಸುತ್ತಿದ್ದಾರೆ.ಚಕ್ಕುಲಿ ಪ್ರಸಾದ ವಿತರಣೆಗೆ ಸರ್ಕಲ್ ಇನ್ಸಪೆಕ್ಟರ್ ಶ್ರೀಧರ ವಸಂತ್ ಸತಾರೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಉದ್ಯಮಿ […]