ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿದೂಷಕರ ವೇಷಧರಿಸಿ 14.33 ಲಕ್ಷ ರೂಪಾಯಿ ಸಂಗ್ರಹಿಸಿ ಅನಾಥಾಶ್ರಮಕ್ಕೆ ದೇಣಿಗೆ ನೀಡಿದ ಯುವಕರ ತಂಡ

ಕಾಪು: ಇಲ್ಲೊಂದು ಯುವಕರ ತಂಡ ಅನಾಥಾಶ್ರಮಕ್ಕೆ ನೆರವಾಗುವುದಕ್ಕಾಗಿಯೇ ಅಷ್ಟಮಿ ವೇಳೆ ವೇಷ ಧರಿಸಿ ಊರೂರು ಸುತ್ತಿ ಹಣ ಸಂಗ್ರಹಿಸಿದೆ. ವಿದೂಷಕರ ವೇಷ ಧರಿಸಿದ ಕಾಪುವಿನ ಸಚಿನ್ ಶೆಟ್ಟಿ ನೇತೃತ್ವದ ತಂಡ ಸಂಗ್ರಹಿಸಿದ 14.33 ಲ.ರೂ.ಯನ್ನು ಕಾರ್ಕಳ ತಾಲೂಕಿನ ಬೈಲೂರು ಕೌಡೂರಿನಲ್ಲಿರುವ ಹೊಸ ಬೆಳಕು ಅನಾಥಾಶ್ರಮದ ಮುಖ್ಯಸ್ಥೆ ತನುಲಾ ತರುಣ್ ಅವರಿಗೆ ಬುಧವಾರ ಹಸ್ತಾಂತರಿಸಿದರು. ತಂಡದ ಸಚಿನ್, ಚೇತನ್, ನಿತೇಶ್, ಸುದೀಪ್, ಅಭಿಷೇಕ್ ಅವರು ತಮ್ಮ ಸಂಗಡಿಗರ ಜತೆ ವೇಷ ಧರಿಸಿ ಉಡುಪಿ ಮತ್ತು ಮಂಗಳೂರಿನಲ್ಲಿ ತಿರುಗಾಡಿ ದೇಣಿಗೆ […]