ಉಡುಪಿ: ಶ್ರೀ ಭಗವತೀ ನಾಸಿಕ್ ಕಲಾತಂಡದ ಅಷ್ಟಮಿ ವೇಷದ ಪೋಸ್ಟರ್ ಬಿಡುಗಡೆ

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಚಿಟ್ಪಾಡಿ ಕಸ್ತೂರ್ಬಾನಗರದ ಶ್ರೀ ಭಗವತೀ ನಾಸಿಕ್ ಕಲಾತಂಡದ ಕಲಾವಿದರು ಮಗುವಿನ ವೈದ್ಯಕೀಯ ಚಿಕಿತ್ಸೆಯ ಸಹಾಯಾರ್ಥವಾಗಿ ವಿಶೇಷ ವೇಷದೊಂದಿಗೆ ಜನರನ್ನು ರಂಜಿಸಲಿದ್ದಾರೆ.ಈ ಕಾರ್ಯಕ್ರಮದ ಪೋಸ್ಟರ್‌ನ್ನು ಕಸ್ತೂರ್ಬಾನಗರದ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರಮೇಶ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ, ಅಣ್ಣಯ್ಯ ಸೇರಿಗಾರ್, ಸಂಸ್ಥೆಯ ಗೌರವಾಧ್ಯಕ್ಷ ಶ್ರೀಧರ ದೇವಾಡಿಗ, ಶಶಿರಾಜ್ ಕುಂದರ್, ಚರಣ್ ಬಂಗೇರ, ಕಲಾ ತಂಡದ ಪ್ರಣಮ್, ಸುಧೀರ್, ಉಮೇಶ್ ಉಪಸ್ಥಿತರಿದ್ದರು. ವೇಷಧರಿಸಿ ಸಂಗ್ರಹಿಸಿದ ಮೊತ್ತವನ್ನು ರಕ್ತದ ಕಾಯಿಲೆಯಿಂದ […]