ಜೂನ್ 8ರಿಂದ ದೇವಸ್ಥಾನ, ಹೋಟೆಲ್ ಗಳು ತೆರೆಯಲಿವೆ: ಸಚಿವ ಕೋಟ

ಉಡುಪಿ: ಕೊರೊನಾ ಲಾಕ್ ಡೌನ್ ನಿಂದಾಗಿ ಬಾಗಿಲು ಮುಚ್ಚಿದ್ದ ಎಲ್ಲ ದೇವಸ್ಥಾನಗಳು ಹಾಗೂ ಹೋಟೆಲ್ ಗಳು ಜೂನ್ 8ರಿಂದ ರಾಜ್ಯಾದ್ಯಂತ ಪುನಾರಂಭಗೊಳ್ಳಲಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಕೊರೊನಾ ಹರಡುವಿಕೆಯನ್ನು‌ ಒಮ್ಮೆಲೆ ತಡೆಗಟ್ಟಲು ಅಸಾಧ್ಯ. ಆದ್ದರಿಂದ ಕೊರೊನಾ ಹರಡುವುದನ್ನು ನಿಯಂತ್ರಣ ಮಾಡುವ ಕ್ರಮಗಳನ್ನು ಕೈಗೊಳ್ಳುವ ಜತೆಗೆ ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಜೂನ್ 8ರಿಂದ ಬಹುತೇಕ ಮೂಲಭೂತ ಸೌಕರ್ಯಗಳು ತೆರೆಯಲಿವೆ ಎಂದು ಅವರು ತಿಳಿಸಿದ್ದಾರೆ.