ಕೋಟ: ಕಡಲ ಕಿನಾರೆಯಲ್ಲಿ ಮೊಳಗಿತು ವಿಷ್ಣು ಸಹಸ್ರನಾಮ

ಉಡುಪಿ: ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡ ವಿಷ್ಣು ಸಹಸ್ರನಾಮ ಪರಿಣಾಮಕಾರಿ ಎಂದು ಗೀತಾನಂದ ಫೌಂಡೇಶನ್ ವಿಶ್ವಸ್ಥರಾದ ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್ ಹೇಳಿದರು.ಕೋಟ ಮಣೂರು ಪಡುಕರೆ ಸಮುದ್ರ ದಡದಲ್ಲಿ ಪ್ರಾಕೃತಿಕ ವಿಕೋಪಗಳ ನಿವಾರಣೆಗಾಗಿ ಹಾಗೂ ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡ ವಿಷ್ಣು ಸಹಸ್ರನಾಮ ಪಠಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ದಿನಗಳಲ್ಲಿ ಪ್ರಾಕೃತಿಕ ವಿಕೋಪ ತಡೆ, ಧರ್ಮ ಜಾಗೃತಿ, ಪರಿಸರ ಸಂರಕ್ಷಣೆಗೆ ಸಹಸ್ರನಾಮ ಪಠಣ ಪೂರಕವಾಗಿದೆ. ಮನುಕುಲದ ಒಳಿತಿಗೆ ಧಾರ್ಮಿಕ ಕೈಂಕರ್ಯ ಹೆಚ್ಚಿನ ಶಕ್ತಿ ನೀಡಲಿದೆ ಇಂಥಹ ಕಾರ್ಯಗಳು ಜಗದಗಲ ಪಸರಿಸಿಕೊಳ್ಳಲಿ ಎಂದು ಹಾರೈಸಿದರು. ಸಮುದ್ರ […]