ಉಡುಪಿ: ಆರೋಗ್ಯವಂತ ಮಹಿಳೆಯಿಂದ ಭವ್ಯ ಸಮಾಜ ನಿರ್ಮಾಣ ಸಾಧ್ಯ: ಡಾ.ಜೇಸ್ಮಾ ಸ್ಟೇಲ್ಲಾ ಪಿಕಾರ್ಡೊ.

ಉಡುಪಿ: ಸುಮನಸಾ ಕೊಡವೂರು ಉಡುಪಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೊಡವೂರು, ಶ್ರೀ ದುರ್ಗಾ ಮಹಿಳಾ ಮಂಡಲ ಕೊಡವೂರು ಇವರ ಜಂಟಿ ಆಶ್ರಯದಲ್ಲಿ ಜಿಲ್ಲಾ ವಿವಿಧ ಆರೋಗ್ಯ ಘಟಕಗಳ ಸಹಯೋಗದೊಂದಿಗೆ ಕೊಡವೂರು “ವಿಪ್ರಶ್ರೀ” ಸಭಾಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸೆ ಮತ್ತು ಮಾಹಿತಿ ಕಾರ್ಯಕ್ರಮ ನೆರವೇರಿತು. ಶಿಬಿರವನ್ನು ಉದ್ಘಾಟಿಸಿದ ಮಲ್ಪೆಯ ವೈದ್ಯಾಧಿಕಾರಿಗಳಾದ ಡಾಕ್ಟರ್ ಜೇಸ್ಮಾ ಸ್ಟೇಲ್ಲಾ ಪಿಕಾರ್ಡೋ ಅವರ ಮಾತನಾಡುತ್ತಾ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಸಂಘಸಂಸ್ಥೆಗಳ ಪಾತ್ರ ಹಿರಿದು ಹಾಗೂ ವಿಶೇಷವಾಗಿ ಮಹಿಳೆಯರು ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು, […]