ವಿನಯ್ ಕುಮಾರ್ ಸೊರಕೆ ಸತತ ಸೋಲಿನಿಂದ ಹತಾಶರಾಗಿದ್ದಾರೆ.

ಉಡುಪಿ: ಸತತ ಎರಡು ಬಾರಿಯ ಸೋಲಿನಿಂದ ವಿನಯ ಕುಮಾರ್ ಸೊರಕೆ ಕಂಗೆಟ್ಟಿದ್ದಾರೆ. ನಮ್ಮದೆ ಸರಕಾರ ಇದೆ, ನಾನು ಏನು ಆಗಿಲ್ಲ ಎಂಬ ಹತಾಶೆ ಅವರನ್ನು ಕಾಡುತ್ತಿದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಲೇವಡಿ ಮಾಡಿದರು. ಕಾಪು ಮಯೂರ ಹೋಟೆಲ್ ಸಭಾಂಗಣದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಆದರೆ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಎಂದು ಸೊರಕೆಗೆ ಟಾಂಗ್ ನೀಡಿದರು. ಆ ಪುಣ್ಯಾತ್ಮ ಸೊರಕೆ ರಾಜಕೀಯದಲ್ಲಿ ಇರಲಿ. […]