ಉಡುಪಿ ಕಲ್ಯಾಣಪುರ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು: ಕ್ರಿಯೇಟಿವ್‌ ಸಮಾಗಮ

ಉಡುಪಿ: ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನ (ರಿ) ಕಾರ್ಕಳ ಇವರ ಸಹಭಾಗಿತ್ವದ ಕ್ರಿಯೇಟಿವ್‌ ಪದವಿಪೂರ್ವ ಕಾಲೇಜು ಕಲ್ಯಾಣಪುರ ಉಡುಪಿಯಲ್ಲಿ ಜೂ.30 ಶುಕ್ರವಾರದಂದು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಮತ್ತು ಶೈಕ್ಷಣಿಕ, ಸಾಂಸ್ಕೃತಿಕ ,ಕ್ರೀಡಾ ಸಂಘಟನೆಗಳ ಉದ್ಘಾಟನೆ ನಿಮಿತ್ತ “ಕ್ರಿಯೇಟಿವ್‌ ಸಮಾಗಮ” ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮವನ್ನು ಸಂಸ್ಥೆಯ ಸಂಸ್ಥಾಪಕರುಗಳಲ್ಲಿ ಓರ್ವರಾದ ಶ್ರೀ ಅಶ್ವತ್ ಎಸ್‌ ಎಲ್‌ ರವರು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತುಗಳನ್ನಾಡಿದರು. “ವಿದ್ಯಾರ್ಥಿಗಳು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಪಿಯುಸಿ ಹಂತಕ್ಕೆ ಬಂದಿದ್ದು, ಬದುಕಿನ ದಿಕ್ಕನ್ನೇ ಬದಲಾಯಿಸುವ […]