ಉಡುಪಿ: ಕಿರಿಯ ಆರೋಗ್ಯ ವೀಕ್ಷಣಾಧಿಕಾರಿ ಖಾಸಗಿ ಲಾಡ್ಜ್ ನಲ್ಲಿ ಅನುಮಾನಾಸ್ಪದ ಸಾವು
ಉಡುಪಿ: ಕರ್ನಾಟಕ ಸರ್ಕಾರದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ವೀಕ್ಷಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಒಬ್ಬ ಖಾಸಗಿ ಲಾಡ್ಜ್ ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಕುಂದಾಪುರದ ಜೆಕೆ ಟವರ್ಸ್ ಎಂಬಲ್ಲಿ ನಡೆದಿದೆ. ಸಾವನ್ನಪ್ಪಿದ ವ್ಯಕ್ತಿಯನ್ನು ಕುಂದಾಪುರ ತಾಲೂಕಿನ ಕೊರ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಿವಮೊಗ್ಗ ಮೂಲದ ಪ್ರಶಾಂತ್ (37) ಎಂದು ಗುರುತಿಸಲಾಗಿದೆ. ಶಿವಮೊಗ್ಗ ಮೂಲದ ಪ್ರಶಾಂತ್ ವಿವಾಹಿತನಾಗಿದ್ದು, ಒಂದು ಪುಟ್ಟ ಮಗುವಿದೆ. ಈತನಿಗೆ ಕುಡಿತದ ಚಟವಿತ್ತು ಎನ್ನಲಾಗಿದೆ. 2010ರಲ್ಲಿ ಆರೋಗ್ಯ […]