ಉಡುಪಿ: ಖತರ್ನಾಕ್ ಅಂತರ್ ಜಿಲ್ಲಾ ಸರಗಳ್ಳನ ಬಂಧನ; ಲಕ್ಷಾಂತರ ರೂ.ಗಳ ಸೊತ್ತು ವಶ

ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಕ್ರಿಯನಾಗಿದ್ದ ಖತರ್ನಾಕ್ ಅಂತರ್ ಜಿಲ್ಲಾ ಸರಗಳ್ಳನ್ನೊಬ್ಬನನ್ನು ಉಡುಪಿ ಪೊಲೀಸರು ಬಂಧಿಸಿದ್ದು, ಆತನಿಂದ 172.02 ಗ್ರಾಂ ಚಿನ್ನ, 3 ದ್ವಿಚಕ್ರ ವಾಹನ ಸೇರಿ ಒಟ್ಟು ₹ 9,38,200 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ಮೂಲದ ಚಂದ್ರಶೇಖರ್ (25) ಎಂಬಾತ ಬಂಧಿತ ಆರೋಪಿ. ಈತನನ್ನು ಉಡುಪಿಯ ಕುಕ್ಕಿಕಟ್ಟೆ ಜಂಕ್ಷನ್ ಬಳಿ ಪೊಲೀಸರು ಬಂಧಿಸಿದ್ದಾರೆ. ಈತ ಸರಗಳ್ಳತನ ಮಾಡಲು ಸೆಕೆಂಡ್ ಹ್ಯಾಂಡ್ ಬಜಾರ್ ನಲ್ಲಿ ಟೆಸ್ಟ್ ಡ್ರೈವ್ ಗೆ ಹೋಗಿರುತ್ತೇನೆಂದು ಬೈಕ್ ಎಗರಿಸುತ್ತಿದ್ದನು. […]