ಮಂಗಳೂರು: ಅ.02 ರಂದು ಸ್ನೇಹಾಲಯ ವ್ಯಸನ ಮುಕ್ತ ಕೇಂದ್ರ ಉದ್ಘಾಟನೆ

ಮಂಗಳೂರು: ಸ್ನೇಹಾಲಯ ಚ್ಯಾರಿಟೇಬಲ್ ಸಂಸ್ಥೆಯು ಕಳೆದ 15 ವರುಷಗಳಿಂದ, ಮಂಜೆಶ್ವರದ ಪಾವೂರು ಬಳಿಯ ಬಾಚಾಳಿಕೆ ಎಂಬಲ್ಲಿ ಮಾನಸಿಕ ಅಸ್ವಸ್ಥರಿಗಾಗಿ ಆಶ್ರಮ ಒಂದನ್ನು ಸ್ಥಾಪಿಸಿ, ಅವರಿಗೆ ಅಸರೆ ಒದಗಿಸಿದ್ದು, ರೋಗಿಗಳ ಶೂಶ್ರುಷೆ ಮಾಡಿ, ಔಷೋದೊಪಚಾರ ನೀಡಿ, ಅವರನ್ನು ಗುಣಪಡಿಸಿ 1300ಕ್ಕೂ ಮಿಗಿಲಾಗಿ ಅಂತಹ ಗುಣಪಟ್ಟ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿ, ನಿಸ್ವಾರ್ಥವಾಗಿ ನಡೆಸುತ್ತಿರುವ ಸೇವೆಯು ನಿರಾಶ್ರಿತ, ನಿರಾಧಾರಿತರಿಗೆ ಸ್ನೇಹಾಲಯವು ಭರವಸೆಯ ಆಶಾದೀಪವಾಗಿದೆ. ಸರಕಾರದ ಮಾನ್ಯತೆ ಪಡೆದು, ಸಾರ್ವಜನಿಕರ ಪ್ರಶಂಸೆ, ಬೆಂಬಲದೊಂದಿಗೆ ಸಂಸ್ಥೆಯು ಮಾಡುತ್ತಿರುವ ಸೇವೆಯು ಈಗ ಮನೆಮಾತಾಗಿದೆ. ಸೇವಾ ಕ್ಷೇತ್ರದಲ್ಲಿ […]