ಉಡುಪಿ: ಕೋವಿಡ್ ನಿಯಮ ಪಾಲಿಸದಿದ್ದಲ್ಲಿ ಕಠಿಣ ಕ್ರಮ: ಪೌರಾಯುಕ್ತ

ಉಡುಪಿ: ಕೋವಿಡ್–19 ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯ ಸಾರ್ವಜನಿಕರು ಕೋವಿಡ್ ನಿಯಾಮವಳಿಗಳನ್ನು ಪಾಲಿಸದೇ ಇರುವುದು ಕಂಡುಬಂದಿದ್ದು, ಸಾರ್ವಜನಿಕರು ಕಟ್ಟುನಿಟ್ಟಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ವಾಣಿಜ್ಯ ಮಳಿಗೆ, ಮಾಲ್ ಅಥವಾ ಇನ್ನಿತರ ಉದ್ದಿಮೆಗಳಲ್ಲಿ ಸಾನಿಟೈಸರ್ ಬಳಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಪ್ರವೇಶ ದ್ವಾರದಲ್ಲಿ ತಾಪಮಾನ ಪರಿಶೀಲಿಸುವುದನ್ನು ಕಡ್ಡಾಯವಾಗಿ ಪಾಲಿಸಬೇಕು. ರೋಗ ಲಕ್ಷಣ ಇರುವವರಿಗೆ ಪ್ರವೇಶ ನೀಡಬಾರದು. ತಪ್ಪಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51 ರಿಂದ 60, ಭಾರತ […]