ಉಡುಪಿ: ಬಾಲಕನೊಬ್ಬನ ಮೇಲೆ ಹೆಜ್ಜೇನು ದಾಳಿ
ಉಡುಪಿ: ಬಾಲಕನೊಬ್ಬನಿಗೆ ಜೇನು ನೊಣ ದಾಳಿ ನಡೆಸಿದ ಘಟನೆ ಇಂದು ಉಡುಪಿಯ ಚಿಟ್ಪಾಡಿ ಎಂಬಲ್ಲಿ ಸಂಭವಿಸಿದ್ದು, ಜೇನು ನೊಣಗಳ ದಾಳಿಯಿಂದ ಬಾಲಕ ಅಸ್ವಸ್ಥಗೊಂಡಿದ್ದಾನೆ ಎನ್ನಲಾಗಿದೆ. ಬಾಗಲಕೋಟೆ ಮೂಲದ ಪುಂಡಲೀಕ ಎಂಬಾತ ಜೇನು ನೊಣಗಳ ದಾಳಿಗೆ ಒಳಗಾದ ಬಾಲಕ. ಈತ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ. ಜೇನು ನೊಣಗಳ ದಾಳಿಯಿಂದ ಅಸ್ವಸ್ಥಗೊಂಡಿದ್ದ ಆತನನ್ನು ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹ್ಮದ್ ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗೆ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.