ಉಡುಪಿ: ಗ್ರಾಪಂ ಫಲಿತಾಂಶ; ಬಿಜೆಪಿ ಮೇಲುಗೈ
ಉಡುಪಿ: ಉಡುಪಿ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ತಾಲೂಕಿನ ಒಟ್ಟು 16 ಗ್ರಾಪಂಗಳ ಪೈಕಿ 8 ಗ್ರಾಪಂಗಳನ್ನು ತನ್ನ ತೆಕ್ಕಿಗೆ ಹಾಕಿಕೊಂಡಿದ್ದು, ನಾಲ್ಕು ಗ್ರಾಪಂಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆದಿದೆ. ಎರಡು ಗ್ರಾಪಂಗಳಲ್ಲಿ ಅತಂತ್ರ ಸ್ಥಿತಿಯಿದ್ದು, ಒಂದು ಗ್ರಾಪಂನಲ್ಲಿ ಸಮಬಲ ಹೋರಾಟ ಇದೆ. ಒಂದು ಗ್ರಾಪಂನ ವಿವರ ಅಪೂರ್ಣವಾಗಿದೆ. ಪೆರ್ಡೂರು ಗ್ರಾಪಂ 28 ವಾರ್ಡ್ ಗಳ ಪೈಕಿ ಬಿಜೆಪಿ 12, ಕಾಂಗ್ರೆಸ್ 15 ಹಾಗೂ 1 ವಾರ್ಡ್ ನಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು […]