ಗಣೇಶ್‌ ಕೆ. ಶೆಟ್ಟಿ ಸಾರಥ್ಯದಲ್ಲಿ ತುಳುಕೂಟ ಗೋವಾ ಘಟಕ ಅದ್ದೂರಿಯಾಗಿ ಲೋಕಾರ್ಪಣೆ.

ಪಣಜಿ: ಗೋವಾದ ತುಳುವರನ್ನು ಸಂಘಟಿಸಿ ಗಣೇಶ್‌ ಕೆ. ಶೆಟ್ಟಿ ಇರ್ವತ್ತೂರು ಅಧ್ಯಕ್ಷತೆಯಲ್ಲಿ ರಚಿಸಲ್ಪಟ್ಟಿರುವ ತುಳುಕೂಟ ಗೋವಾ ಘಟಕ ಅದ್ದೂರಿ ಕಾರ್ಯಕ್ರಮದೊಂದಿಗೆ ಲೋಕಾರ್ಪಣೆಗೊಂಡಿದೆ. ತುಳುನಾಡಿನಿಂದ ಬಂದಿದ್ದ ಗಣ್ಯರು ಹಾಗೂ ಗೋವಾದ ಪ್ರಮುಖರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ತುಳುಕೂಟ ಗೋವಾದ ಅಧ್ಯಕ್ಷ ಗಣೇಶ್‌ ಕೆ. ಶೆಟ್ಟಿ ಇರ್ವತ್ತೂರು ಗೋವಾದಲ್ಲಿ ತುಳುಕೂಟ ಆರಂಭಿಸಲು ಕಾರಣವಾದ ಅಂಶಗಳನ್ನು ವಿವರಿಸಿದರು. ಮುಂಬೈ ಮತ್ತು ಬೆಂಗಳೂರಿನಲ್ಲಿ ತುಳುವರು ತುಳುವರ ಸಂಘಗಳನ್ನು ಕಟ್ಟಿಕೊಂಡು ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಅವರು ತುಳುನಾಡಿನಲ್ಲೇ ಇರುವಂತಹ ಅನುಭವ ಪಡೆದಿದ್ದಾರೆ. […]