ಉತ್ತಮ ಸೇವೆಗಾಗಿ ಅಗ್ನಿಶಾಮಕ ಚಾಲಕರಿಗೆ ಚಿನ್ನದ ಪದಕ

ಉಡುಪಿ: ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವಾ ಇಲಾಖೆಯ ವತಿಯಿಂದ ಉಡುಪಿಯ ಅಗ್ನಿಶಾಮಕ ಠಾಣೆಯಲ್ಲಿ ಅಗ್ನಿಶಾಮಕ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರವೀಂದ್ರ ಅವರ ಅತ್ಯುತ್ತಮ ಮತ್ತು ಗಣನೀಯ ಸೇವೆಯನ್ನು ಪರಿಗಣಿಸಿ, ಇವರ ಉತ್ತಮ ಸೇವೆಗಾಗಿ ರಾಜ್ಯ ಸರಕಾರವು 2024 ನೇ ಸಾಲಿನ ಚಿನ್ನದ ಪದಕ ನೀಡಿ ಗೌರವಿಸಿದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.