ಉಡುಪಿ: ಚಿತ್ರ ಪ್ರದರ್ಶನ ಆರಂಭಿಸಿದ ಡಯಾನ ಚಿತ್ರಮಂದಿರ
ಉಡುಪಿ: ಕೋವಿಡ್ ಕಾರಣದಿಂದ ಕಳೆದ ಎಂಟು ತಿಂಗಳಿನಿಂದ ಬಾಗಿಲು ಮುಚ್ಚಿದ್ದ ಜಿಲ್ಲೆಯ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಮುಂದಿನ ವಾರದಿಂದ ಪ್ರದರ್ಶನ ಆರಂಭಿಸುವ ಸಾಧ್ಯತೆ ಇದೆ. ಡಯಾನ ಚಿತ್ರಮಂದಿರ ಈ ವಾರದಿಂದಲೇ ಪ್ರದರ್ಶನ ಆರಂಭಿಸಿದೆ. ಲಾಕ್ ಡೌನ್ ತೆರವುಗೊಂಡ ಬಳಿಕ ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಅವಕಾಶ ಕಲ್ಪಿಸಿತ್ತು. ಆದರೆ ಹೊಸ ಸಿನಿಮಾಗಳು, ಸ್ಟಾರ್ ನಾಯಕರ ಚಿತ್ರಗಳು ಬಿಡುಗಡೆ ಆಗದ ಕಾರಣ ಹಾಗೂ ಪ್ರೇಕ್ಷಕರ ಕೊರತೆಯಿಂದ ಉಡುಪಿ ನಗರ ಸಹಿತ ಜಿಲ್ಲೆಯ ಚಿತ್ರಮಂದಿರಗಳು ಇದುವರೆಗೂ ಪ್ರದರ್ಶನ ಆರಂಭಿಸಿಲ್ಲ. ಇದೀಗ ಉಡುಪಿ […]