ಉಡುಪಿಯಲ್ಲಿ ಸದ್ದಿಲ್ಲದೇ ಹರಡ್ತಿದೆ ಮಲೇರಿಯಾ, ಡೆಂಗ್ಯೂ: ಎಚ್ಚರ ವಹಿಸಿ

ಉಡುಪಿ : ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮಲೇರಿಯಾ ರೋಗ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಅಲ್ಲಲ್ಲಿ ಡೆಂಗ್ಯೂ ಪ್ರಕರಣಗಳು ಕೂಡ ಕಂಡುಬರುತ್ತಿವೆ. ಉಡುಪಿ ಸರ್ವಿಸ್ ಬಸ್‍ಸ್ಟ್ಯಾಂಡ್, ಸಿಟಿ ಬಸ್‍ಸ್ಟ್ಯಾಂಡ್, ತೆಂಕಪೇಟೆ ಪ್ರದೇಶದಲ್ಲಿ ಕಂಡು ಬಂದ ಮಲೇರಿಯಾ ಇತರ ಕಡೆಗಳಿಗೂ ವ್ಯಾಪಕವಾಗಿ ಹರಡುತ್ತಿದ್ದು, ಮುಂಜಾಗೃತ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಎನ್.ವಿ.ಬಿ.ಡಿ.ಸಿ.ಪಿ ವಿಭಾಗದವರು ವ್ಯಾಪಕ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ ಅವರ ಕಾರ್ಯಕ್ಕೆ ಹೋಟೇಲ್, ಕ್ಯಾಂಟೀನ್ ಮಾಲಕರು/ಅಂಗಡಿ ಮಾಲಕರು/ಬಿಲ್ಡರ್ಸ್/ಅಪಾರ್ಟ್‍ಮೆಂಟ್ ನಿರ್ವಾಹಕರು/ವ್ಯಾಪಾರಿ ಮಳಿಗೆಗಳು ಮತ್ತು ಇತರ […]