ದೀಪಾವಳಿಯ ಹಣತೆಗಳ ಬೆಳಕಿನಲ್ಲಿ ನೀವೂ ಹೊಳೆದುಬಿಡಿ: ಬೆಳಕಿನ ಹಬ್ಬದ ವಿಶೇಷ ಬರಹ

ಕಣ್ಣ ಕೋರೈಸುವ ಅಲಂಕಾರಿಕ ಬಲ್ಬುಗಳ ಬೆಳಕು, ವಾಹನಗಳ ಮಿಣಿ ಮಿಣಿ ಬೆಳಕು ದಿನನಿತ್ಯವೂ ನಮ್ಮ ಬೆನ್ನಟ್ಟುತ್ತಿದ್ದರೂ ದೀಪಾವಳಿಗೆ ಮಾತ್ರ ಜಿಗ್ಗೆಂದು ಹೊಳೆಯುವ ಸಾಲು ಸಾಲು ಹಣತೆಗಳ ಫಳಫಳ ಹೊಳಪಿದೆಯಲ್ಲವಾ, ಅದು ಎದೆಯೊಳಗೆ ಎಬ್ಬಿಸುವ ಭಾವತರಂಗಗಳು ಮುಗಿಲಿನಷ್ಟೆ ಮಿಗಿಲು. ಎಷ್ಟೇ ಕತ್ತಲಲ್ಲಿದ್ದರೂ ಈ ದೀಪಾವಳಿಯ ಹಣತೆಯ ಹೊಂಬೆಳಕಿಗೆ ಸುಮ್ಮನೆ ಕಣ್ಣು ತೇಲಿಸಿಬಿಟ್ಟರೆ, “ಆಹಾ ದೀಪಾವಳಿ ಬಂತು” ಎಂದು ಮೊದಲೇ ಹೊಳಪೇರಿದ್ದ ಕಣ್ಣು, ಸಾವಿರ ಮೆಗಾ ವ್ಯಾಟ್ ಭರವಸೆಯ ವಿದ್ಯುತ್ ತುಂಬಿಕೊಂಡು ಬೆಳಕಿನ ಜಾತ್ರೆಯಾಗುತ್ತದೆ. ದೀಪ, ಪಟಾಕಿ, ಗೂಡುದೀಪ, ರುಚಿ […]
ಬದುಕು ಭಾವಕ್ಕೆ ಬೆಳಕು ಸಿಗುವುದು ಇದೇ ಹಬ್ಬದಿಂದ: ದೀಪಾವಳಿಯ ವಿಶೇಷ ಬರಹ

ದೀಪಾವಳಿ ಹಬ್ಬ ಎಂದಾಕ್ಷಣ ಕಣ್ಣಮುಂದೆ ಬರುವುದು ದೀಪ, ಹಣತೆ ಮತ್ತು ಬೆಳಕು. ಆದರೆ ಈ ಬೆಳಕು ಕೇವಲ ಹೊರಗಿನ ಬೆಳಕು ಮಾತ್ರವಲ್ಲ, ಅದು ಮನುಷ್ಯನೊಳಗಿನ ಅಂಧಕಾರವನ್ನು ಹೋಗಲಾಡಿಸುವ ಸಂಕೇತವಾಗಿದೆ. ಮನುಷ್ಯನಲ್ಲಿರುವ ಅಜ್ಞಾನ, ದುರ್ವಿಚಾರ, ದುಆಚಾರ ಹಾಗೂ ಮನದ ಕತ್ತಲೆ ಇವುಗಳನ್ನೆಲ್ಲ ದೂರ ಮಾಡಿ, ಆತ್ಮಜ್ಞಾನ ಮತ್ತು ಶಾಂತಿಯ ಬೆಳಕು ಹಚ್ಚುವ ಹಬ್ಬವೇ ದೀಪಾವಳಿ. ನಾವು ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಮನೆಯಲ್ಲಿ ದೀಪ ಬೆಳಗಿಸುತ್ತೇವೆ. ಆದರೆ ದೀಪಾವಳಿ ದಿನದಲ್ಲಿ ದೀಪ, ಹಣತೆ, ಬೆಳಕಿಗೆ ವಿಶೇಷ ಮಹತ್ವ ನೀಡಲಾಗುತ್ತದೆ. […]