ಉಡುಪಿ: ದಲಿತ ಹೋರಾಟಗಾರ, ಸಮಾಜ ಸೇವಕ ಸುಂದರ್ ಕಪ್ಪೆಟ್ಟು ಕೊರೊನಾದಿಂದ ನಿಧನ
ಉಡುಪಿ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ, ಭಾರತೀಯ ಜೀವವಿಮಾ ನಿಗಮದ ಕುಂದಾಪುರ ಶಾಖೆಯ ಉದ್ಯೋಗಿ ಸುಂದರ್ ಕಪ್ಪೆಟ್ಟು (52) ಅವರು ಕೋವಿಡ್ 19 ಸೋಂಕಿನಿಂದ ಇಂದು ನಿಧನ ಹೊಂದಿದರು. ಅವರಿಗೆ ಕೆಲವು ದಿನಗಳ ಹಿಂದೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಸುಂದರ್ ಕಪ್ಪೆಟ್ಟು ಅವರು ಹಲವಾರು ದಲಿತ ಹೋರಾಟ […]