ಉಡುಪಿ ಚಿತ್ಪಾಡಿ: ಶ್ರೀ ಶಂಗೇರಿ ಶ್ರೀಗಳ ಭೇಟಿ
ಉಡುಪಿ: ಶ್ರೀ ಶಾರದಾಂಭ ದೇವಸ್ತಾನ ಚಿತ್ಪಾಡಿ ದೇವರ ಸನ್ನಿಧಾನಕ್ಕೆ ಇತ್ತೀಚಿಗೆ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಕರಕಮಲಸಂಜಾತರಾದ ಶ್ರೀ ಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸ್ವಾಮಿಗಳು ಚಿತ್ತೈಸಿದರು. ಪೂರ್ಣಕುಂಭ ಸ್ವಾಗತದೊಂದಿಗ ಸ್ವಾಗತಿಸಲಾಯಿತು ಶ್ರೀ ಶಾರದಾ ದೇವಿಗೆ ಆರತಿ ಬೆಳಗಿಸಿ ಬಳಿಕ ಭಕ್ತರನ್ನು ಅನುಗ್ರಹಿಸಿದರು. ದೇವಳದ ಜಯರಾಂ ಭಟ್, ಗಣೇಶ್ ಭಟ್, ನೂರಾರು ಭಕ್ತರೂ ಉಪಸ್ಥಿತರಿದ್ದರು.