ಬಜೆಟ್‌ನಲ್ಲಿ ಹಿಂದುಳಿದ ವರ್ಗ, ದಲಿತರಿಗೆ ನಿರಾಶೆ

ಉಡುಪಿ: ರಾಜ್ಯದ ಜನತೆಗೆ ಬಜೆಟ್ ಬಗ್ಗೆ ಬಹಳ ನಿರೀಕ್ಷೆಯಿತ್ತು. ಆದರೆ ಅದಕ್ಕೆಲ್ಲಾ ಸಿದ್ದರಾಮಯ್ಯನವರು ಎಳ್ಳುನೀರು ಬಿಟ್ಟಿದ್ದಾರೆ. ಹಿಂದುಳಿದ ವರ್ಗ ದಲಿತರಿಗೆ ವಂಚಿಸುವ ಕೆಲಸಕ್ಕೆ ಸಿದ್ದರಾಮಯ್ಯ ಕೈ ಹಾಕಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕಿಡಿಕಾರಿದ್ದಾರೆ. ಬಜೆಟ್ ಕುರಿತು ಪ್ರತಿಕ್ರಿಯಿಸಿದ ಅವರು, ದೇವರಾಜ ಅರಸರ ಪ್ರತಿರೂಪ, ಪರಿಶಿಷ್ಟ ಜಾತಿ-ಪಂಗಡ, ದಲಿತರಿಗೆ ನ್ಯಾಯ ಕೊಡುವ ವ್ಯಕ್ತಿ ಎಂದು ಪ್ರಶಂಸಿಕೊಳ್ಳುತ್ತಿದ್ದ ಅವರು, ಬಜೆಟ್‌ನಲ್ಲಿ ಹಿಂದುಳಿದ ವರ್ಗ ಹಾಗೂ ದಲಿತರ ಪಾಲಿಗೆ ನಿರಾಶಾದಾಯಕವಾಗಿಸಿದೆ ಎಂದು ದೂರಿದರು. ರಾಜ್ಯದ ಶೇ. 50ರಷ್ಟು ಹಿಂದುಳಿದ […]