ಬ್ರಹ್ಮಾವರದಲ್ಲಿ ಪ್ಲೈಓವರ್, ಸರ್ವಿಸ್ ರಸ್ತೆಗೆ ಸಾರ್ವಜನಿಕರ ಆಗ್ರಹ

ಉಡುಪಿ: ಬ್ರಹ್ಮಾವರದಲ್ಲಿ ಪ್ಲೈಓವರ್ ಹಾಗೂ ಸರ್ವಿಸ್ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಸಾರ್ವಜನಿಕರು ಬುಧವಾರ ಬೃಹತ್ ಧರಣಿ ನಡೆಸಿದರು. ಧರಣಿಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಮಂದಿ ಜನರು ಸಿಟಿ ಸೆಂಟರ್‌ನಿಂದ ಎಸ್.ಎಂ.ಎಸ್. ಮೂಲಕ ದೂಪದಕಟ್ಟೆಯವರೆಗೆ ತುರ್ತು ಸರ್ವಿಸ್ ರಸ್ತೆ ನಿರ್ಮಿಸಬೇಕು. ಹಾಗೆಯೇ ಶಾಶ್ವತ ಪರಿಹಾರವಾಗಿ ಪ್ಲೈ ಓವರ್ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು. ಸದ್ಯ ಇರುವ ಹೆದ್ದಾರಿ ರಸ್ತೆ ಅವೈಜ್ಞಾನಿಕವಾಗಿದ್ದು, ಪ್ರತಿದಿನ ಸಾವುನೋವು ಸಂಭವಿಸುತ್ತಿವೆ. ಈಗಾಗಲೇ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಂದು ವಾರದೊಳಗೆ ಸರ್ವಿಸ್ ರಸ್ತೆಯ […]