ಭೂತಾರಾಧನೆಯಲ್ಲಿನ ಕಲೆ ರಂಗಕ್ಕೆ ತರುವುದು ಅಗತ್ಯ

ಉಡುಪಿ: ಭೂತಾರಾಧನೆಯ ಒಳಗೆ ಕಲೆ ಇದೆ. ಅದನ್ನು ಹೆಕ್ಕಿ ತೆಗೆದು ರಂಗಕ್ಕೆ ತರುವ ಕೆಲಸ ಆಗಬೇಕು ಎಂದು ಸಾಹಿತಿ ಅರವಿಂದ ಮಾಲಗತ್ತಿ ತಿಳಿಸಿದರು. ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ವತಿಯಿಂದ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾದ 13ನೇ ವರ್ಷದ ರಂಗಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಮೃತ ಸೋಮೇಶ್ವರ ಭೂತಾರಾಧನೆಯ ಪಾಡ್ದನಗಳನ್ನು ಇಟ್ಟುಕೊಂಡು ರಂಗಪ್ರಯೋಗ ನಡೆಸಿದ್ದರು. ಅಂಥ ಪ್ರಯೋಗ ಗಳನ್ನು ಆಧುನಿಕ ರಂಗಭೂಮಿ ಯಲ್ಲಿ ಹೆಚ್ಚಿಗೆ ಆಗಿಲ್ಲ. ಇದು ಜೇನುಗೂಡಿಗೆ ಕೈ ಹಾಕುವ ಕೆಲಸ. ಏನೋ ಮಾಡಲು ಹೋಗಿ […]