ಉಡುಪಿ: ಭಟ್ರ ಹೋಟೆಲ್ ಖ್ಯಾತಿಯ ಭಟ್ರು ಇನ್ನಿಲ್ಲ
ಉಡುಪಿ: ಉಡುಪಿಯಲ್ಲಿ ‘ಭಟ್ರ ಹೋಟೆಲ್’ ಎಂದೇ ಪ್ರಸಿದ್ಧಿ ಪಡೆದಿರುವ ಹೋಟೆಲ್ ಮಾಲೀಕ ಶ್ರೀನಿವಾಸ್ ರಾವ್ (56) ಅವರು ಕೊರೊನಾ ಸೋಂಕಿನಿಂದ ನಿಧನ ಹೊಂದಿದರು. ಉಡುಪಿಯ ಮೆಸ್ಕಾಂ ಬಳಿ ಅವರು ಹೋಟೆಲ್ ನಡೆಸುತ್ತಿದ್ದರು. ಅವರು ಕೋವಿಡ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.