ಬೆಳ್ತಂಗಡಿ: ಮಹಿಳೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಪಲ್ಟಿಯಾದ ಟೆಂಪೊ ಟ್ರಾವೆಲರ್!

ಉಡುಪಿ: ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ತಪ್ಪಿಸಲು ಟೆಂಪೋ ಟ್ರಾವೆಲರ್ ನಡುವರಸ್ತೆಯಲ್ಲೇ ಪಲ್ಟಿಯಾದ ಘಟನೆ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಳದಂಗಡಿಯಲ್ಲಿ ನಡೆದಿದೆ. ಅಪಘಾತದ ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಗುರುವಾಯನಕೆರೆಯಿಂದ ಅಳದಂಗಡಿ ಕಡೆಗೆ ಟೆಂಪೋ ಟ್ರಾವೆಲರ್ ವೇಗವಾಗಿ ಬರುತ್ತಿತ್ತು. ಈ ವೇಳೆ ಏಕಾಏಕಿ ರಸ್ತೆದಾಟಲು ಮಹಿಳೆಯೊಬ್ಬರು ಯತ್ನಿಸಿದ್ದಾರೆ. ಆಗ ಮಹಿಳೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಟೆಂಪೋ ಟ್ರಾವೆಲರ್ ಡ್ರೈವರ್ ಯತ್ನಿಸಿದ್ದಾರೆ. ಆದರೂ ಮಹಿಳೆಗೆ ಟೆಂಪೊ ಟ್ರಾವಲರ್ ತಾಗಿ ಮಹಿಳೆ ಬಿದ್ದಿದ್ದಾರೆ. ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.ಆದರೆ […]