ಉಡುಪಿ: ಭಯದ ವಾತಾವರಣ ಸೃಷ್ಟಿಸಿದ ಯುವಕನ ಸೆರೆ

ಉಡುಪಿ: ಸಾರ್ವಜನಿಕ ಸ್ಥಳಗಳಲ್ಲಿ ಭೀತಿ‌ಯ‌ ವಾತಾವರಣ ಸೃಷ್ಟಿಸಿದ ಯುವಕನೋರ್ವನನ್ನು ಸೆರೆ ಹಿಡಿದ ಘಟನೆ ಉಡುಪಿಯ ಅಜ್ಜರಕಾಡು ಬಳಿ ನಡೆದಿದೆ. ಸಮಾಜಸೇವಕ ನಿತ್ಯಾನಂದ‌ ಒಳಕಾಡು ಸಹಾಯವಾಣಿ‌ ಪೋಲಿಸರ‌ ಸಹಕಾರದಿಂದ‌ ಯುವಕನನ್ನು ವಶಕ್ಕೆ ಪಡೆದು ದೊಡ್ಡಣಗುಡ್ಡೆಯ ಡಾ ಎ ವಿ ಬಾಳಿಗ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವು ದಿನಗಳಿಂದ ಯುವಕ ಉಡುಪಿ ನಗರದಲ್ಲಿ ರಂಪಾಟ ನಡೆಸಿದ್ದನು. ರಕ್ಷಿಸಲ್ಪಟ್ಟ ಯುವಕ ಬೇಲೂರು ತಾಲೂಕಿನ ಚನ್ನಕೇಶವ ನಗರದ ಹೇಮಂತ್ ಎಂದು ತಿಳಿದುಬಂದಿದೆ. ವಾರಸುದಾರರು ಸಮಾಜಸೇವಕ ನಿತ್ಯಾನಂದ‌ ಒಳಕಾಡು ಅವರನ್ನು‌ ಸಂಪರ್ಕಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ […]