ಭಿಕ್ಷಾಟನೆಯಲ್ಲಿ ಗಳಿಸಿದ ಹಣವನ್ನು ದೇಗುಲಕ್ಕೆ ದಾನ ಮಾಡಿದ ಕುಂದಾಪುರದ ಮಹಿಳೆ..!
ಕುಂದಾಪುರ: ಮಹಿಳೆ ಒಬ್ಬರು ಭಿಕ್ಷಾಟನೆಯಲ್ಲಿ ತಾನು ಗಳಿಸಿದ ಹಣವನ್ನು ಕೂಡಿಟ್ಟು ಲಕ್ಷ ರೂಪಾಯಿ ದಾಟಿದ ಬಳಿಕ ವಿವಿಧ ದೇವಸ್ಥಾನಗಳ ದಾಸೋಹಕ್ಕೆ ನೀಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ತಾಲ್ಲೂಕಿನ ಕಂಚುಗೋಡು ಗ್ರಾಮದ ವಯೋವೃದ್ಧೆ ಅಶ್ವತ್ಥಮ್ಮ ತನ್ನ ಗಂಡ, ಮಕ್ಕಳೊಂದಿಗೆ ಸಂಸಾರ ಸಾಗಿಸುತ್ತಿದ್ದ ಅವರು, ಪತಿ ಹಾಗೂ ಮಕ್ಕಳನ್ನು ಕಳೆದುಕೊಂಡ ಬಳಿಕ ಜೀವನ ನಿರ್ವಹಣೆಗೆ ಭಿಕ್ಷಾಟನೆಯಲ್ಲಿ ತೊಡಗಿದರು. ಸಾಲಿಗ್ರಾಮದ ಆಂಜನೇಯ ದೇವಸ್ಥಾನ, ಪೊಳಲಿಯ ರಾಜರಾಜೇಶ್ವರಿ ದೇವಸ್ಥಾನ, ಕದ್ರಿಯ ಮಂಜುನಾಥ ಸ್ವಾಮಿ ದೇವಸ್ಥಾನ, ಸಾಸ್ತಾನದ ಟೋಲ್ ಗೇಟ್ ಮುಂತಾದ ಕಡೆಗಳಲ್ಲಿ ಅಶ್ವತ್ಥಮ್ಮ […]