ಉಡುಪಿ: ಕುಸಿದುಬಿದ್ದು ಬ್ಯಾಂಕ್ ಉದ್ಯೋಗಿ ಮೃತ್ಯು

ಉಡುಪಿ: ಬ್ಯಾಂಕ್ ಉದ್ಯೋಗಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಉಡುಪಿಯ ಬೈಲಕೆರೆಯ ಅಪಾರ್ಟ್ಮೆಂಟ್ ಒಂದರಲ್ಲಿ ನಡೆದಿದೆ. ಮೃತರನ್ನು ಗುರುಪ್ರಸಾದ್ ರಾವ್ (43) ಎಂದು ಗುರುತಿಸಲಾಗಿದೆ. ಗುರುಪ್ರಸಾದ್ ಬ್ಯಾಂಕ್ ಉದ್ಯೋಗಿಯಾಗಿದ್ದು, ರಾತ್ರಿ ವೇಳೆ ಗಂಟಲು ಉರಿ ಕಾಣಿಸಿಕೊಂಡಿತ್ತು. ಬೆಳಿಗ್ಗೆ 3 ಗಂಟೆ ಸುಮಾರಿಗೆ ಫ್ಲ್ಯಾಟಿನಲ್ಲಿ ಹಠಾತ್ ಕುಸಿದು ಬಿದ್ದಿದ್ದರು ಎನ್ನಲಾಗಿದೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರು ಗುರುಪ್ರಸಾದ್ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅವರು ಹೃದಯಾಘಾತದಿಂದಲೋ ಅಥವಾ ಇನ್ನಾವುದೋ ಖಾಯಿಲೆಯಿಂದ ಮೃತಪಟ್ಟಿರಬಹುದು ಶಂಕಿಸಲಾಗಿದೆ. […]