ಉಡುಪಿ ಬಡಗಬೆಟ್ಟು ಸೊಸೈಟಿಗೆ 19.37 ಕೋಟಿ ರೂ. ಲಾಭ: ಜಯಕರ ಶೆಟ್ಟಿ ಇಂದ್ರಾಳಿ

ಉಡುಪಿ: ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 2024-25ನೇ ಸಾಲಿನಲ್ಲಿ 2,935 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿ 19.37 ಕೋಟಿ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ. ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 107 ವರ್ಷಗಳಿಂದ ಸಾರ್ಥಕ ಸೇವೆಯನ್ನು ನೀಡುತ್ತಿರುವ ಸಂಘವು 2024-25 ಆರ್ಥಿಕ ವರ್ಷಾಂತ್ಯಕ್ಕೆ 21,519 ಸದಸ್ಯರಿಂದ 4.83 ಕೋ.ರೂ ಪಾಲು ಬಂಡವಾಳ ಹೊಂದಿದೆ. 1,050 ಕೋಟಿ ರೂ. ವ್ಯವಹಾರ ವರದಿ ವರ್ಷಾಂತ್ಯಕ್ಕೆ ಸಂಘವು […]