ಉಡುಪಿ: ಆಟೊ ರಿಕ್ಷಾ ಪ್ರಯಾಣ ದರ ಹೆಚ್ಚಳಕ್ಕೆ ಆಗ್ರಹಿಸಿ ಮನವಿ

ಉಡುಪಿ: ಆಟೊ ರಿಕ್ಷಾ ಕನಿಷ್ಠ ಮೀಟರ್ ದರ ಹಾಗೂ ರನ್ನಿಂಗ್ ಕಿ.ಮೀ. ದರ ಹೆಚ್ಚಳ ಮಾಡುವಂತೆ ಆಗ್ರಹಿಸಿ ಸಿಐಟಿಯುಗೆ ಸೇರಿದ ಕುಂದಾಪುರ ಮತ್ತು ಬ್ರಹ್ಮಾವರ ಆಟೊ ರಿಕ್ಷಾ ಚಾಲಕ ಹಾಗೂ ಮಾಲೀಕರ ಸಂಘದಿಂದ ಅಪರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲೆಯಲ್ಲಿ ಸುಮಾರು 2 ವರ್ಷಗಳ ಹಿಂದೆ ಆಟೊ ರಿಕ್ಷಾ ಕನಿಷ್ಠ ಮೀಟರ್ ದರ ಮತ್ತು ರನ್ನಿಂಗ್ ಕಿ.ಮೀ. ದರ ಪರಿಷ್ಕರಿಸಲಾಗಿತ್ತು. ಇದೀಗ ಪೆಟ್ರೋಲ್, ಡೀಸೆಲ್‌, ಗ್ಯಾಸ್, ಇನ್ಸೂರೆನ್ಸ್ ಪ್ರೀಮಿಯಂ, ವಾಹನ ಬಿಡಿ ಭಾಗಗಳ ಬೆಲೆ ವಿಪರೀತ ಹೆಚ್ಚಳವಾಗಿರುವ […]