ಉಡುಪಿ: ಮೂರು ಮಂದಿ ಮುಸುಕುಧಾರಿಗಳಿಂದ ಎಟಿಎಂ ಕಳವಿಗೆ ಯತ್ನ

ಉಡುಪಿ: ಕೆನರಾ ಬ್ಯಾಂಕ್‌ನ ಎಟಿಎಂ ಕೇಂದ್ರಕ್ಕೆ ನುಗ್ಗಿದ ಮೂವರು ಮುಸುಕುಧಾರಿಗಳು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಉಡುಪಿ ಉದ್ಯಾವರದಲ್ಲಿ ಇಂದು ಮುಂಜಾನೆ ನಡೆದಿದೆ. ಮೂರು ಮಂದಿ ಮುಸುಕುಧಾರಿ ಕಳ್ಳರು ಕೆನರಾ ಬ್ಯಾಂಕ್ ನ ಎಟಿಎಂಗೆ ನುಗ್ಗಿ ಎಟಿಎಂ ಬಾಕ್ಸ್ ಒಡೆಯಲು ಯತ್ನಿಸಿದ್ದಾರೆ. ಈ ವೇಳೆ ಎಟಿಎಂ ಸೈರನ್ ಮೊಳಗಿದ್ದು, ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಸೈರನ್ ಸಂದೇಶ ಕೆನರಾ ಬ್ಯಾಂಕಿನ ಸೆಕ್ಯೂರಿಟಿ ವಿಭಾಗಕ್ಕೆ ರವಾನೆಯಾಗಿದ್ದು, ಬ್ಯಾಂಕ್ ಸಿಬ್ಬಂದಿ ಕೂಡಲೇ ಕಾಪು ಪೋಲಿಸರಿಗೆ ಮಾಹಿತಿ ರವಾನಿಸಿದ್ದಾರೆ. ಅಲ್ಲದೆ, ಬ್ಯಾಂಕಿನ […]