ಉಡುಪಿ: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯ ಬಂಧನ

ಉಡುಪಿ: ಉಡುಪಿ ಹೊರವಲಯದ ಕೊಡವೂರು ಗ್ರಾಮದ ಪಾದರಾಯಣ ಆಚಾರ್ಯರ ಸ್ಮಾರಕಾರ್ಥ ತಂಗುದಾಣ ಮೂಡುಬೆಟ್ಟು ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವ ಆರೋಪಿಯನ್ನು ಉಡುಪಿ ಸೆನ್ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದು, ಆತನಿಂದ ₹35 ಸಾವಿರೌಲ್ಯದ 1.204 ಕಿ.ಲೋ. ತೂಕದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಗೌತಮ (ಬುದ್ಧ) ಎಂದು ಗುರುತಿಸಲಾಗಿದೆ. ಈತ 2ನೇ ಆರೋಪಿ ಪ್ರಣಮ್ ಎಂಬಾತನಿಂದ ಗಾಂಜಾ ಪಡೆದು ಆತನ ಆದೇಶದ ಮೇರೆಗೆ ಮೂಡುಬೆಟ್ಟು ಬಸ್ ನಿಲ್ದಾಣದ ಬಳಿ […]