ಉಡುಪಿ: ಆ. 10ರಂದು ಸನಾತನ ಯಕ್ಷಾಲಯದ 12ನೇ ವಾರ್ಷಿಕೋತ್ಸವ
ಉಡುಪಿ: ಯಕ್ಷಗುರು ರಾಕೇಶ್ ರೈ ಅಡ್ಕ ನೇತೃತ್ವದ ಸನಾತನ ಯಕ್ಷಾಲಯ ಮಂಗಳೂರು ಸಂಸ್ಥೆಯು ತನ್ನ 12ನೇ ವಾರ್ಷಿಕೋತ್ಸವವನ್ನು ಆಗಸ್ಟ್ 10ರ ಮಂಗಳವಾರ ಆಚರಿಸಿಕೊಳ್ಳುತ್ತಿದೆ. ಈ ಪ್ರಯುಕ್ತ ಸಂಸ್ಥೆಯ ವಿದ್ಯಾರ್ಥಿಗಳಿಂದ ಅಂದು ಸಂಜೆ ಘಂಟೆ 4.00 ರಿಂದ ಪೂರ್ವರಂಗ ಮತ್ತು ಸಂಜೆ ಘಂಟೆ 4.30 ರಿಂದ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ, ಉಡುಪಿ ಇದರ ವಿದ್ಯಾರ್ಥಿಗಳಿಂದ ಅತೀ ಅಪರೂಪವಾಗಿ ಕಾಣಸಿಗುವ ಒಡ್ಡೋಲಗಗಳು ಹಾಗೂ ತೆರೆ ಕಲಾಸುಗಳ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ. ಇತ್ತೀಚೆಗೆ ಯಕ್ಷಗಾನ ಪ್ರದರ್ಶನಗಳು ಪ್ರೇಕ್ಷಕರ ಅನುಕೂಲಕ್ಕೆ […]